ಅಮ್ಮ ಮಾತಿಗೆ ಮುಂಚೆ ಒಂದು ಗಾದೆ ಹೇಳ್ತಾರೆ. ಅದೂ ಕೂಡ ಎಲ್ಲೂ ಕೇಳದ ಅಪರೂಪದ ಗಾದೆಗಳು. ಅಂತಹ ಒಂದಷ್ಟು ಗಾದೆಗಳನ್ನ, ಅದರ ಅರ್ಥಗಳನ್ನ ಇಲ್ಲಿ ಹಾಕ್ತೀನಿ. ಪ್ರಾಂತ್ಯ, ಬಳಕೆಗೆ ತಕ್ಕಂತೆ ಕೆಲ ಪದಗಳಲ್ಲಿ/ಅರ್ಥಗಳಲ್ಲಿ ಕೊಂಚ ವ್ಯತ್ಯಾಸ ಇರಬಹುದು.
ಅವರು ಹೊಸ ಗಾದೆ ಹೇಳಿದ್ರೆ ಅದನ್ನೂ ಇದೇ ಥ್ರೆಡ್ ಗೆ ಸೇರಿಸ್ತೀನಿ
https://abs.twimg.com/emoji/v2/... draggable="false" alt="😊" title="Smiling face with smiling eyes" aria-label="Emoji: Smiling face with smiling eyes">
ಅವರು ಹೊಸ ಗಾದೆ ಹೇಳಿದ್ರೆ ಅದನ್ನೂ ಇದೇ ಥ್ರೆಡ್ ಗೆ ಸೇರಿಸ್ತೀನಿ
ಹಾವು ಹೆತ್ತ ಅಮ್ಮ ಬೇಲಿ ಹೊಕ್ಕಳು (ಬೇಲಿಗೆ ಹೋದಳು)
ಅರ್ಥ: ಹಾವು ಬೇಲಿಯ ಸಂದಿಗೊಂದಿಯಲ್ಲಿರುತ್ತೆ. ಹಾವನ್ನು ಹೆತ್ತರೆ ಅದನ್ನು ಹುಡುಕಲು ಬೇಲಿಗೆ ಹೋಗಬೇಕು.
ತಪ್ಪು ಮಾಡುವವರ ಒಡನಾಟದಿಂದ ನಾವೂ ತಪ್ಪು ಮಾಡುವಂತಾಗುತ್ತದೆ.

ಆಗೋವರೆಗೂ ಕಾದು ಆರೋವರೆಗೂ ಕಾಯಲಿಲ್ಲ
ಅರ್ಥ: ಹಸಿವಾದಾಗ ಅಡುಗೆ ಆಗೋವರೆಗೂ ಕಾದು ಅದು ಆರುವವರೆಗೂ ಕಾಯದಿದ್ದರೆ ಪ್ರಯೋಜನವಿಲ್ಲ.
ಮೊದಲಿನಿಂದ ತಾಳ್ಮೆ ಹೊಂದಿದ್ದು ಕೊನೆಯಲ್ಲಿ ತಾಳ್ಮೆ ಕಳೆದುಕೊಂಡರೆ ನಮಗೇ ನಷ್ಟ.

ಮಣ್ಣಿನ ಮಂಡಿ ನೆಚ್ಚಿಕೊಂಡು ಹೊಳೆ ಹಾದ ಹಾಗೆ
ಅರ್ಥ: ಮಣ್ಣಿನ ಮಂಡಿ ಇಟ್ಟುಕೊಂಡು ಹೊಳೆ ದಾಟಿದರೆ ಮಣ್ಣು ಕರಗಿ ನೀರಾಗುತ್ತದೆ.
ಅರ್ಹರಲ್ಲದವರನ್ನು ನಂಬಿಕೊಂಡು ಕೆಲಸ ಮಾಡಿದರೆ ನಮಗೇ ಸಮಸ್ಯೆ.

ಜೇನು ತೆಗೆಯುವವನು ಬೆರಳು ನೆಕ್ಕದೆ ಇರುತ್ತಾನಾ?
ಅರ್ಥ: ಜೇನು ತುಪ್ಪ ತಯಾರಿಸುವಾಗ ಸಿಹಿ ತಿಂದುನೋಡಬೇಕು ಎನಿಸಿ ಬೆರಳು ನೆಕ್ಕುತ್ತಾರೆ.
ಜನರು ಬೇರೆಯವರಿಗಾಗಿ ಮಾಡುವ ಕೆಲಸದಲ್ಲೂ ತಮ್ಮ ಲಾಭ ನೋಡಿಕೊಳ್ಳುತ್ತಾರೆ.

ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ?
ಅರ್ಥ: ರಾವಣನಷ್ಟು ಬೃಹತ್ ಮನುಷ್ಯನಿಗೆ ಅರೆಕಾಸಿನ ಅಳತೆಯ ಮಜ್ಜಿಗೆ ಎಲ್ಲಿ ಸಾಲುತ್ತದೆ?
ಅವರವರ ಅವಶ್ಯಕತೆಗೆ ತಕ್ಕಷ್ಟು ಪೂರೈಕೆ ಇದ್ದರೆ ಮಾತ್ರ ಅವರಿಗೆ ನೆಮ್ಮದಿಯಾಗುತ್ತದೆ.

ಆಕಾಶ ನೋಡೋದಕ್ಕೆ ನೂಕುನುಗ್ಗಲೇ?
ಅರ್ಥ: ಆಕಾಶ ಎಲ್ಲರಿಗೂ ಎಲ್ಲಿ ಬೇಕಾದರೂ ಕಾಣುತ್ತದೆ. ಅದನ್ನು ನೋಡಲು ನೂಕುನುಗ್ಗಲೇಕೆ?
ಯಾವಾಗ ಬೇಕಾದರೂ ಸಿಗುವ ವಸ್ತುವಿಗೆ ಹಾತೊರೆಯಬಾರದು.

ಶೆಟ್ಟಿಗೆ ಏನು ಕೆಲಸ ಅಂದ್ರೆ ಅಳೆಯೋದು, ಸುರಿಯೋದು.
ಅರ್ಥ: ಯಾವಾಗಲೂ ಒಂದೇ ಕೆಲಸ ಮಾಡುತ್ತಿರುವವರನ್ನು ದಿನಪೂರ್ತಿ ದಿನಸಿಯನ್ನು ಅಳೆದು ಸುರಿಯುವ ಶೆಟ್ಟಿಗೆ ಹೋಲಿಸುತ್ತಾರೆ.